ಕನ್ನಡ ಭಾಷಾ ಶಿಕ್ಷಕರ ಸಂಪನ್ಮೂಲ
ಮಂಗಳವಾರ, ಏಪ್ರಿಲ್ 7, 2020
ಸೋಮವಾರ, ಮೇ 2, 2016
ಭಾನುವಾರ, ಮೇ 1, 2016
ದುರಾಸೆ ತೋಳ ಕತೆ
....ದುರಾಸೆಯ ತೋಳ .....
ಒಂದು ಗ್ರಾಮದಲ್ಲಿ ರೈತನೊಬ್ಬ ನೂರಾರು ಕುರಿಗಳನ್ನು ಸಾಕಿಕೊಂಡಿದ್ದನು. ಅವನು ಕುರಿಗಳೊಂದಿಗೆ ವಾಸಿಸುತ್ತಿದ್ದ ಸ್ಥಳ ಕಾಡಿನ ಸಮೀಪದಲ್ಲೇ ಇದ್ದುದರಿಂದ ತೋಳವೊಂದು ದಿನವೂ ಕುರಿಗಳನ್ನು ಆಸೆಗಣ್ಣಿನಿಂದ ನೋಡುತ್ತಿತ್ತು. ಹೇಗಾದರೂ ಮಾಡಿ ಕುರಿಗಳನ್ನು ಹಿಡಿದು ಅವುಗಳ ರುಚಿನೋಡಬೇಕೆಂದು ಅದರ ಆಸೆ ಆಸೆಯಾಗೆ ಉಳಿದಿತ್ತು. ರೈತನ ಚಾಣಾಕ್ಷತನದ ಮುಂದೆ ಅದರ ಕುರಿಗಳನ್ನು ಹಿಡಿಯುವ ಉಪಾಯಗಳು ಫಲಿಸಿರಲಿಲ್ಲ.
ಹೀಗಿರುವಾಗ ಒಮ್ಮೆ ಕಾಡಿನಲ್ಲಿ ತೊಳಕ್ಕೆ ಸಿಂಹವು ಪೂರ್ತಿಯಾಗಿ ತಿಂದು ಬಿಟ್ಟಿದ್ದ ಕುರಿಯ ಚರ್ಮವೊಂದು ಸಿಕ್ಕಿತು. ತೊಳಕ್ಕೆ ಅದನ್ನು ನೋಡಿದ ಕೂಡಲೇ ಉಪಾಯವೊಂದು ಹೊಳೆಯಿತು. ಅದು ಆ ಚರ್ಮವನ್ನು ಧರಿಸಿ. ಕುರುಬನಿಗೆ ಕಾಣದಂತೆ ಬಂದು ಕುರಿದೊಡ್ಡಿಯನ್ನು ಸೇರಿಕೊಂಡಿತು. ಪ್ರತಿದಿನ ರಾತ್ರಿ ಒಂದೊಂದೇ ಕುರಿಮರಿಗಳನ್ನು ಹಿಡಿದು ತಿನ್ನಬಹುದೆಂಬುದು ತೊಳದ ಉಪಾಯವಾಗಿತ್ತು. ಆದರೆ, ತೊಳದ ಗ್ರಹಚಾರ ಕೆಟ್ಟಿತ್ತು. ಅದು ಕುರಿದೊಡ್ಡಿಯನ್ನು ಸೇರಿದ ರಾತ್ರಿಯೇ ರೈತನ ಮನೆಗೆ ಅವನ ಬಂಧುಗಳು ಬಂದಿದ್ದರು. ಅವತ್ತು ಅವನು ಮಾಂಸದ ಊಟವನ್ನು ಮಾಡಿಬಡಿಸಲು ಅವನ್ನು ನಿರ್ಧರಿಸಿದ. ಆದ್ದರಿಂದ ಅವತ್ತು ರೈತನೂ ತನ್ನ ಆಳನ್ನು ಕರೆದು ಕೊಬ್ಬಿದ ಕುರಿಯೊಂದನ್ನು ಹಿಡಿದು ತರಲು ಕಳುಹಿಸಿದ. ಆಳು ಕತ್ತಲೆಯಲ್ಲಿ ಕುರಿವೇಷದಲ್ಲಿದ್ದ ತೋಳವನ್ನೇ ಕುರಿಯೊಂದು ತಿಳಿದು ಹಿಡಿದು ತಂದು ಕೊಯ್ದು ಹಾಕಿದನು. ಈ ರೀತಿಯಾಗಿ ತೋಳವು ತನ್ನ ದುರಾಸೆಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
